ಜನರ ಧ್ವನಿ ನ್ಯೂಸ್
ಕೊಡೇಕಲ್ : ಮುಂಗಾರು ಮಳೆಯು ಆರಂಭವಾಗಿ ತಿಂಗಳು ಕಳೆದರೂ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಮಹಲಿನ ಮಠದ ಪೂ. ವೃಷಭೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಉತ್ತಮ ಮಳೆ ಮತ್ತು ಬೆಳೆಗಾಗಿ ವಿಶೇಷ ಪೂಜೆ ಹಾಗೂ ಪರ್ವ ಕಾರ್ಯಕ್ರಮ ಮಾಡಲಾಯಿತು
ಬೆಳಗ್ಗೆಯಿಂದಲೇ ಹಿರಿಯರು ಯುವಕರು ಮಹಿಳೆಯರು ಸೇರಿದಂತೆ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಕ್ಕಳಿಗೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಾಯಿತು. ಬಳಿಕ ಹೊಸ ಮಣ್ಣಿನ ಬಿಂದಿಗೆಯಲ್ಲಿ ನೀರು ತುಂಬಿ ವಿಶೇಷ ಆರಾಧನೆ ನೆರವೇರಿಸಿ, ರೈತರ ಹಾಗೂ ಜಾನುವಾರುಗಳ ರಕ್ಷಣೆಗಾಗಿ ಶೀಘ್ರ ಮಳೆಯಾಗುವಂತೆ ವರುಣದೇವರಲ್ಲಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಪೂಜೆಯ ಬಳಿಕ ಭಕ್ತರಿಗೆ ಪೂಜಾ ಪ್ರಸಾದ ವಿತರಿಸಲಾಯಿತು.







