ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ: ಅಂಜುಮನ್ ಚುನಾವಣೆ ಕುರಿತು ಪಾರದರ್ಶಕ ತನಿಖೆಗೆ ಆಗ್ರಹ
ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಸಮಿತಿಯ ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪಾರದರ್ಶಕ ಹಾಗೂ ನ್ಯಾಯಸಮ್ಮತ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿ, ನಿಜವಾದ ಸದಸ್ಯರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಸಂಬಂಧಿತ ಇಲಾಖೆಗೆ ಮನವಿ ಮಾಡಲಾಗಿದೆ.
ವಕಪ್ ಅಧಿಕಾರಿಗಳು ಚುನಾವಣೆಗಾಗಿ ಮೇ 27 ರಿಂದ 30 ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಫಾರ್ಮ್ ಪಡೆದುಕೊಂಡು ತುಂಬಿ ಕೊಡಲು ಆದೇಶವಂತು ಮಾಡಿದ್ದಾರೆ ಆದರೆ ದಿನಾಂಕ 25 ಮತ್ತು 26 ಇವರೇ ಇವೆರಡೂ ಹೃದಯ ದಿನಗಳಾಗಿದ್ದು ಚುನಾವಣೆಯ ಪ್ರಕ್ರಿಯೆಗೆ ಇದು ರಜಾ ದಿನ ಇರುವುದಿಲ್ಲ ಅದರಂತೆ ಆಡಳಿತ ಅಧಿಕಾರಿಗಳು ಎರಡು ದಿನವೂ ಬಂದಿಲ್ಲ ಅಭ್ಯರ್ಥಿಗಳು ಪಡೆದುಕೊಂಡು ಯಾರಿಗೆ ಸಲ್ಲಿಸಬೇಕು ಎಂಬುದು ಇನ್ನುವರೆಗೂ ತಿಳಿದುಬಂದಿಲ್ಲ ಅಂಜುಮನ್ ಕಮಿಟಿ ಕಾರ್ಯಾಲಯಕ್ಕೆ ಹೋದಾಗ ಅಲ್ಲಿರುವ ಕರ್ತವ್ಯ ನಿರ್ವಹಿಸುತ್ತಿರುವ ಅಭಿ ಬುಲ್ಲ ಗೋಲಂದಾಸ್ ಇವರು ಕೇವಲ ಫಾರ್ಮ್ ರೂ.100 ತೆಗೆದುಕೊಂಡು ಕೊಡುತ್ತಾರೆ ಆದರೆ ಅಭ್ಯರ್ಥಿಗಳು ಫಾರ್ಮ್ ತುಂಬಿದ ನಂತರ ಚುನಾವಣೆಯ ಅಧಿಕಾರಿಗಳಿಗೆ ಕೊಡಬೇಕು ಆದರೆ ಅವರು ಗೈರು ಇದ್ದಾರೆ. ಮುದ್ದೇಬಿಹಾಳದ ಸಾಕಷ್ಟು ಯುವಕರು ಅವರಿಗೆ ಫೋನ್ ಮುಖಾಂತರ ಕರೆ ಮಾಡಿದಾಗ ಅವರು ಕೇವಲ ಬರುವುದಾಗಿ ಮಾತ್ರ ಉತ್ತರಿಸುತ್ತಾರೆ.







