ಮರಣೋತ್ತರ ದೇಹದಾನಕ್ಕೆ ತುಕಾರಾಮ–ಶೈಲಜಾ ದಂಪತಿ ಸಂಕಲ್ಪ

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ: ಪಟ್ಟಣದ ನೇತಾಜಿ ನಗರ ಬಡಾವಣೆಯ ನಿವಾಸಿಗಳಾದ ತುಕಾರಾಮ ಕಲಾಲ ಹಾಗೂ ಶೈಲಜಾ ಕಲಾಲ (ಟಿಂಗರೀಕರ) ದಂಪತಿ ಮರಣಾನಂತರ ತಮ್ಮ ದೇಹವನ್ನು ಬಾಗಲಕೋಟೆಯ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಶ್ರೀ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾನ ಮಾಡಲು ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಮರಣಾನಂತರ ದೇಹವನ್ನು ಸಮಾಧಿ ಅಥವಾ ಅಂತ್ಯಸಂಸ್ಕಾರಕ್ಕೆ ಒಳಪಡಿಸುವ ಬದಲು ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಸಮಾಜದ ಹಿತಕ್ಕಾಗಿ ದೇಹದಾನ ಮಾಡುವುದು ಅತ್ಯುನ್ನತ ಸೇವೆಯಾಗಿದೆ ಎಂಬ ನಂಬಿಕೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ದೇಹದಾನ ಮಹತ್ವದ ಕೊಡುಗೆಯಾಗಿದ್ದು, ಸಮಾಜದಲ್ಲಿ ದೇಹದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ತಮ್ಮ ನಿರ್ಧಾರದ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.
ದಂಪತಿಯ ಈ ಸಮಾಜಮುಖಿ ನಿರ್ಧಾರವನ್ನು ಕುಟುಂಬದ ಸದಸ್ಯರು, ಬಂಧು–ಬಳಗ ಹಾಗೂ ಪರಿಚಿತರು ಶ್ಲಾಘಿಸಿದ್ದು, ಇಂತಹ ಕಾರ್ಯ ಇತರರಿಗೂ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें