ಮುದ್ದೇಬಿಹಾಳ–ನಾರಾಯಣಪುರ ಮಾರ್ಗಕ್ಕೆ ಹೊಸ ಬಸ್‌ ಸಂಚಾರ ಆರಂಭಿಸಲು ಸಾರ್ವಜನಿಕರ ಮನವಿ

 

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ:  ಪಟ್ಟಣದಿಂದ ನಾರಾಯಣಪುರ ಮಾರ್ಗಕ್ಕೆ ಪ್ರತಿದಿನ ಬೆಳಿಗ್ಗೆ 8.30 ಗಂಟೆಗೆ ಹಾಗೂ ನಾರಾಯಣಪುರದಿಂದ ಸಂಜೆ 5 ಗಂಟೆಗೆ ಹೊಸ ಬಸ್‌ ಸಂಚಾರ ಆರಂಭಿಸುವಂತೆ ಆಗ್ರಹಿಸಿ ಸಾರ್ವಜನಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಮುದ್ದೇಬಿಹಾಳ, ನಾರಾಯಣಪುರ, ನಾಲತವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶಿಕ್ಷಣ, ಆರೋಗ್ಯ, ಕಂದಾಯ ಇಲಾಖೆಗಳ ಸಿಬ್ಬಂದಿ, ವಿವಿಧ ಬ್ಯಾಂಕ್‌ಗಳ ನೌಕರರು, ರೈತರು ಹಾಗೂ ವೀರೇಶನಗರದ 8, 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಪ್ರತಿದಿನ ಮುದ್ದೇಬಿಹಾಳ–ನಾರಾಯಣಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಸೂಕ್ತ ಸಮಯದಲ್ಲಿ ಬಸ್‌ ಸೌಲಭ್ಯ ಇಲ್ಲದ ಕಾರಣ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಕೆಎಎಂಎಸ್ (KAMS) ಆನ್‌ಲೈನ್‌ ಹಾಜರಾತಿ ವ್ಯವಸ್ಥೆಯಿಂದ ಸರ್ಕಾರಿ ನೌಕರರು ಸಮಯಕ್ಕೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದ್ದು, ಬಸ್‌ ಕೊರತೆಯಿಂದ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ವಿವರಿಸಲಾಗಿದೆ.

ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಮುದ್ದೇಬಿಹಾಳದಿಂದ ಬೆಳಿಗ್ಗೆ 8.30 ಗಂಟೆಗೆ ಹಾಗೂ ನಾರಾಯಣಪುರದಿಂದ ಸಂಜೆ 5 ಗಂಟೆಗೆ ನೂತನ ಬಸ್‌ ಸಂಚಾರ ಆರಂಭಿಸಿ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಶೋಭಾ ಪಾಟೀಲ್, ರೇಣುಕಾ ಬೇದಕಿನಾಳ, ಲಕ್ಷ್ಮಿ ಗೌಡರ, ರಿಜ್ವಾನ ಘಾಟೆ, ಶರಣಮ್ಮ ಗುರು ವಿನಮಠ, ಗೋಪಾಲ್, ರಮೇಶ್, ಶೇಕ್ ಸಾಬ್ ನದಾಫ್, ಅಶೋಕ್ (ಬ್ಯಾಂಕ್ ನೌಕರ), ಗೀತಾಂಜಲಿ, ಬಸಮ್ಮ ಸೇರಿದಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಹಿ ಹಾಕಿದ್ದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें