ಪ್ರಾಣಿ-ಪಕ್ಷಿಗಳ ದಾಹ ತಣಿಸಲು ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಜಲಸೇವೆಗೆ ಚಾಲನೆ.

ಜನರ ಧ್ವನಿ ನ್ಯೂಸ್ 

ಮುದ್ದೇಬಿಹಾಳ: ತೀವ್ರಗೊಳ್ಳುತ್ತಿರುವ ಬೇಸಿಗೆಯ ಬಿಸಿಲಿನಿಂದಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಮೂಕ ಪ್ರಾಣಿ ಹಾಗೂ ಪಕ್ಷಿಗಳ ದಾಹ ತಣಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ‘ಪಕ್ಷಿಗಳಿಗೆ ನೀರುಣಿಸುವ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ವಿದ್ಯಾನಗರ ಕಾರ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಿಡಮರಗಳಿಗೆ ಹಾಗೂ ಕಾಂಪೌಂಡ್ ಮೇಲೆ ನೀರಿನ ಪಾತ್ರೆಗಳನ್ನು ಇಡುವ ಮೂಲಕ ಜಲಸೇವೆಗೆ ಚಾಲನೆ ನೀಡಲಾಯಿತು.
ಪುಣ್ಯದ ಕೆಲಸಕ್ಕೆ ಕೈಜೋಡಿಸಿ:
​ಈ ವೇಳೆ ಮಾತನಾಡಿದ  ತಾಲ್ಲೂಕು ಯೋಜನಾಧಿಕಾರಿ ಶಿವಾನಂದ್ ಪಿ. ಅವರು, ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೆರೆ-ಕುಂಟೆಗಳು ಬತ್ತಿ ಹೋಗುತ್ತಿವೆ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಾವೆಲ್ಲರೂ ನಮ್ಮ ಮನೆಯ ಟೆರೇಸ್ ಮೇಲೆ, ಗಿಡಮರಗಳ ಕೆಳಗೆ ಹಾಗೂ ಖಾಲಿ ಜಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಈ ಮೂಲಕ ಪಕ್ಷಿ ಸಂಕುಲವನ್ನು ಉಳಿಸಿದರೆ ಮಾತ್ರ ನಮಗೂ ಪುಣ್ಯ ಬರುತ್ತದೆ ಎಂದು ಕರೆ ನೀಡಿದರು. ಅಲ್ಲದೆ, ತಾಲ್ಲೂಕಿನಾದ್ಯಂತ ಇರುವ ಯೋಜನೆಯ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಮಾನವೀಯ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಮೇಲ್ವಿಚಾರಕ ನಾಗೇಶ್ ಎಸ್.ಕೆ, ವಿದ್ಯಾನಗರ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಕೆಸರಟ್ಟಿ ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ನಿರ್ಮಲಾ ರಾಯಗೊಂಡ್, ಶೈಲಜಾ ಚಿನಿವಾರ, ಸರಸ್ವತಿ ಬಿರಾದಾರ, ಮಧುಶ್ರೀ ಮಠ, ರೇಣುಕಾ ಮಾಲಿಪಾಟೀಲ, ಸುನಂದಾ ಯಾದಗಿರಿ, ಲಕ್ಷ್ಮೀ ನಾಗಾವಿ, ಶರಣಮ್ಮ ಹಿರೇಮಠ ಸೇರಿದಂತೆ ಹಲವು ಸದಸ್ಯರು ಭಾಗವಹಿಸಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें