ಶುದ್ದ ಕುಡಿಯುವ ನೀರಿಗೂ ಗ್ರಾಮಸ್ಥರ ಪರದಾಟ; ಅಧಿಕಾರಿಗಳ ‘ಭರವಸೆ’ ಬರಿ ಪೊಳ್ಳೇ?

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ: ಸರ್ಕಾರ ‘ಮನೆ ಮನೆಗೆ ಗಂಗೆ’ ಎನ್ನುತ್ತದೆ, ಆದರೆ ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಮಾತ್ರ ಜನ ಗಂಗೆಗಾಗಿ ಮೈಲುಗಟ್ಟಲೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ! ಕಳೆದ ಹದಿನೈದು ದಿನಗಳಿಂದ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಅಧಿಕಾರಿಗಳ ನಿರ್ಲಕ್ಷ್ಯದ ಕೆಸರಿನಲ್ಲಿ ಸಿಲುಕಿ ಸ್ಥಗಿತಗೊಂಡಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರಗಳು ಧೂಳು ಹಿಡಿಯುತ್ತಿದ್ದರೆ, ಗ್ರಾಮದ ಜನ ಹನಿ ನೀರಿಗಾಗಿ ಹೊಲ-ಗದ್ದೆಗಳ ಬಾವಿ ಆಶ್ರಯಿಸುವಂತಾಗಿದೆ.
ಹಳ್ಳಿಯ ಜನರಿಗೆ ಶುದ್ಧ ನೀರು ಒದಗಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ನೀರಿಗಾಗಿ ಮೈಲುಗಟ್ಟಲೆ ಅಲೆಯುತ್ತಿರುವ ಜನರ ಆಕ್ರೋಶ ಈಗ ಕಟ್ಟೆಯೊಡೆದಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಹದಿನೈದು ದಿನದಿಂದ ಹನಿ ನೀರಿಲ್ಲದೆ ಪರದಾಡುತ್ತಿದ್ದೇವೆ. ಕೂಲಿ ಕೆಲಸ ಬಿಟ್ಟು ನೀರು ತರಲು ತೋಟದ ಬಸ್ತಿಗಳಿಗೆ ಹೋಗುವ ಸ್ಥಿತಿ ಬಂದಿದೆ. ಅಧಿಕಾರಿಗಳಿಗೆ ಎಷ್ಟು ಸಲ ಹೇಳಿದರೂ ‘ಇವತ್ತು ಬರ್ತೀವಿ, ನಾಳೆ ಬರ್ತೀವಿ’ ಅಂತ ಕಾಲ ಕಳೆಯುತ್ತಿದ್ದಾರೆ. ನಮಗೆ ಭರವಸೆ ಬೇಡ, ಶುದ್ದೀಕರಣ ನೀರು ಬೇಕು. ಕೂಡಲೇ ಸರಿಪಡಿಸದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುವುದಕ್ಕೆ ಗ್ರಾಮಸ್ಥರು ಎಚ್ಚರಿಕೆ.
ಬಿಸಿಲು ಹೆಚ್ಚಾಗುತ್ತಿದೆ, ಶುದ್ಧ ನೀರಿಲ್ಲದೆ ಅನಿವಾರ್ಯವಾಗಿ ಕೊಳವೆ ಬಾವಿ ನೀರು ಕುಡಿಯುತ್ತಿದ್ದೇವೆ. ಇದರಿಂದ ಸಣ್ಣ ಮಕ್ಕಳಿಗೆ ಆರೋಗ್ಯ ಕೆಡುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಂತ್ರ ಹಾಕಿದ್ದಾರೆ, ಆದರೆ ಅದು ಧೂಳು ಹಿಡಿಯುತ್ತಿದೆ. ಅಧಿಕಾರಿಗಳು ಕಚೇರಿಯಲ್ಲಿ ಎಸಿ ಗಾಳಿಯಲ್ಲಿ ಕೂರುತ್ತಾರೆ, ನಮ್ಮ ಕಷ್ಟ ಕೇಳುವವರಿಲ್ಲ ಹಂತವಾಗಿದೆ ಎಂದು ಹಣಮಂತ ಪೂಜಾರಿ ಆರೋಪಿಸಿದರು.
——————————————
ಚವನಭಾವಿ ಗ್ರಾಮದ ನೀರಿನ ಘಟಕ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಸರಿಪಡಿಸಲು ಸೂಚನೆ,
ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತನಾಡಿ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ತುರ್ತು ಕ್ರಮ ವಹಿಸಲಾಗುವುದು. ಎಂದು
ಸಂಗನಗೌಡ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿಗಳು (EO), ತಾಲ್ಲೂಕು ಪಂಚಾಯತ್ ಮುದ್ದೇಬಿಹಾಳ ಇವರು ತಿಳಿಸಿದ್ದಾರೆ.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें