ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ
: ಏ. 17 ರಿಂದ 20 ರವರೆಗೆ ಸಂಭ್ರಮದ ಧಾರ್ಮಿಕ ಕಾರ್ಯಕ್ರಮ.
ಸಿದ್ಧಾಪುರ ಪಿ.ಟಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ.
ತಾಲ್ಲೂಕಿನ ಸುಕ್ಷೇತ್ರ ಸಿದ್ದಾಪುರ ಪಿ.ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಗ್ರಾಮದ ದೇವಸ್ಥಾನದ ಆವರಣದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಏಪ್ರಿಲ್ 17 ರಿಂದ ಏಪ್ರಿಲ್ 20 ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ನಾಲ್ಕು ದಿನಗಳ ಕಾಲ ಧಾರ್ಮಿಕ ಸಂಭ್ರಮ:
ಏಪ್ರಿಲ್ 17 ರಂದು ಶುಕ್ರವಾರ ಹನಗಂಡಿ ಗ್ರಾಮದಿಂದ ಕಳಸದ ಆಗಮನ, ಗಂಗಸ್ಥಳ ಪೂಜೆ ಹಾಗೂ ವಾದ್ಯ ವೈಭವದೊಂದಿಗೆ ದೇವಸ್ಥಾನಕ್ಕೆ ಕಳಸ ತರುವುದು.
ಏಪ್ರಿಲ್ 18 ರಂದು ಶನಿವಾರ ಶ್ರೀ ಭೂತನಾಳ ಸಿದ್ದೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ, ಕುಂಭಮೇಳ ಹಾಗೂ ರಾತ್ರಿ 10 ಗಂಟೆಗೆ ಸುಪ್ರಸಿದ್ಧ ವಾದಿ-ಪ್ರತಿವಾದಿ ಡೊಳ್ಳಿನ ಪದಗಳ ಕಾರ್ಯಕ್ರಮ.
ಏಪ್ರಿಲ್ 19 ರಂದು ಭಾನುವಾರ ನಸುಕಿನ ಜಾವ ಹೋಮ-ಹವನ, ಮೂರ್ತಿ ಪ್ರತಿಷ್ಠಾಪನೆ, ಕಲಶಾರೋಹಣ ಹಾಗೂ ಧರ್ಮಸಭೆ ನಡೆಯಲಿದೆ. ರಾತ್ರಿ 9 ಗಂಟೆಗೆ ‘ಶ್ರೀ ಅಮೋಘಸಿದ್ದೇಶ್ವರ ಮಹಾತ್ಮೆ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.
ಈ ದೇವಸ್ಥಾನದ ಉದ್ಘಾಟನೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾಗಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಭಕ್ತಾದಿಗಳಿಗೆ ನಿರಂತರವಾಗಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಟಿ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತ್ರೆಯ ಪತ್ರಿಕೆ ಬಿಡುಗಡೆಯಲ್ಲಿ ಶ್ರೀ ಸಂಗಯ್ಯ ಒಡೆಯರ,ಶ್ರೀಕಾಂತಯ್ಯ ಒಡೆಯರ, ಶ್ರೀ ಶೈಲ್ ಒಡೆಯರ, ಅರವಿಂದ್ರಯ್ಯ,ನಿವೃತ್ತಿ ಶಿಕ್ಷಕ ಹಿರಿಯರಾದ ಒಡೆಯರ, ಎಚ್ ಬಿ ಅಸ್ಕಿ,ಮಾಜಿ ಗ್ರಾಪಂ ಉಪಾಧ್ಯಕ್ಷ ಬಸಪ್ಪ ಚಲವಾದಿ,ಶಿವಪ್ಪ ಸೋಮನಾಳ, ದ್ಯಾವಪ್ಪ ಮೇಟಿ,ಗುರುಪಾದ ಹಾಲ್ಯಾಳ,ಹಣಮಂತ ರಾ ಸೋಮನಾಳ, ಡಾ ಸಿದ್ದು ಮುತ್ತತಿ,ಎಂ ಬಿ ಹಾಲ್ಯಾಳ, ಲಕ್ಕಪ್ಪ ಸೋಮನಾಳ, ಗುರುಪಾದ ಅಸ್ಕಿ, ಸಿದ್ದಲಿಂಗಪ್ಪ ಸೋಮನಾಳ, ಯಲ್ಲಪ್ಪ ಗೊಡೇಕಾರ,ತಿಪ್ಪಣ್ಣ ಹಾಲ್ಯಾಳ, ಅಮ್ಮೋಗಿ ಮೇಟಿ ಸೇರಿದಂತೆ ಸಿದ್ದಾಪುರ ಪಿ.ಟಿ ಗ್ರಾಮದ ಸಮಸ್ತ ಗುರು-ಹಿರಿಯರು, ದೈವ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.







