ರಾಷ್ಟ್ರೀಯ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ: ಪಟ್ಟಣದ ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ  ೩೬ನೇ ಪಟ್ಟಾಭಿಷೇಕ ಮಹೋತ್ಸವವನ್ನು ಮೇ.೮ ಹಾಗೂ ೯ ರಂದು ಬಾದಾಮಿ ತಾಲ್ಲೂಕು ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ ಜಗದ್ಗುರು ದಯಾನಂದಪುರಿ ಸ್ವಾಮೀಜಿಗಳು ಆಗಮಿಸಿದ್ದ ವೇಳೆ ಅವರು ಸಮಾಜದ ಬಾಂಧವರ ಸಭೆಯಲ್ಲಿ ಮಾತನಾಡಿದರು. ಹಂಪಿಯಲ್ಲಿ ದೇವಾಂಗ ಸಮಾಜದ ಮೂಲಮಠವಿದ್ದು ತಮಿಳುನಾಡಿನ ತ್ರಿಮೂರ್ತಿ ಮಲೈನಲ್ಲಿ,ಬಾದಾಮಿಯ ಬನಶಂಕರಿ ಕ್ಷೇತ್ರದಲ್ಲಿ,ವಿಜಾಪುರದಲ್ಲಿ ಮತ್ತು ನೆಲಮಂಗಲದ ಕೆಂಪಲಿಂಗನಹಳ್ಳಿಯಲ್ಲಿ ಶ್ರೀಗಳು ಗಾಯತ್ರಿಪೀಠದ ಶಾಖಾ ಮಠಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.
 ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ,ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಹಂಪಿ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಹಯೋಗದಲ್ಲಿ ಅಖಿಲ ಭಾರತ ಮಟ್ಟದ ದೇವಾಂಗ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ ೩೬ನೇ ಪಟ್ಟಾಭಿಷೇಕ ಮಹೋತ್ಸವನ್ನು ಸಂಘಟಿಸಿದ್ದಾರೆ.ರಾಷ್ಟಾçದಾದ್ಯಂತ ಇರುವ ದೇವಾಂಗ ಸಮಾಜ  ಬಾಂಧವರನ್ನು ಒಂದೆಡೆ ಸೇರಿಸಿ ನಮ್ಮ ಸಂಘಟನಾ ಶಕ್ತಿಯನ್ನು ತೋರಿಸುವ ಉದ್ದೇಶದಿಂದ ಹಾಗೂ ರಾಜಕೀಯ,ಆರ್ಥಿಕ,ಶೈಕ್ಷಣಿ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಶಕ್ತಿ ತುಂಬಲು ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
 ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಹಂಪಿ ಹೇಮಕೂಟ ಗಾಯತ್ರಿ ಮಹಾಸಂಸ್ಥಾನ ಗುರುಪೀಠದ ದಯಾನಂದಪುರಿ ಸ್ವಾಮೀಜಿಗಳು ಮಾತನಾಡಿ,ಮಠದಿಂದ ಈಗಾಗಲೇ ಕೆಂಪಲಿಂಗನಹಳ್ಳಿ ಶಾಖಾಮಠದ ಆವರಣದಲ್ಲಿ ಒಂದು ಶಾಲಾ ಕಟ್ಟಡ,ಬೃಹತ್ ಕಲ್ಯಾಣಮಂಟಪ ನಿರ್ಮಿಸಲಾಗಿದೆ.ದೇವಾಂಗ ಸಂಘವು ಸಮಾಝದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡುತ್ತ ಬಂದಿದೆ.ಇದಲ್ಲದೇ ಹಲವಾರು ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ಮತ್ತು ನೇಕಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಸಮಾಜದ ಬಾಂಧವರಿಗೆ ಆಧುನಿಕ ತಂತ್ರಜ್ಞಾನದಿಂದ ಆಗುತ್ತಿರುವ ಹಲವಾರು ತೊಂದರೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬೃಹತ್ ಸಂಘಟನೆಯ ಸಮಾವೇಶ ಆಯೋಜಿಸಲಾಗುತ್ತಿದೆ.
 ರಾಜ್ಯದ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಅನ್ಯ ರಾಜ್ಯದ ಪೀಠಾಧಿಪತಿಗಳು,ದೇವಾಂಗ ಸಮಾಜದ ಅಧ್ಯಕ್ಷರು,ಮುಖಂಡರು ಆಗಮಿಸುತ್ತಿದ್ದಾರೆ.ಈ ಸಮಾವೇಶಕ್ಕೆ ನಾಡಿನ ಮೂಲೆ ಮೂಲೆಯಲ್ಲಿರುವ ದೇವಾಂಗ ಸಮಾಜದ ಕುಲಬಾಂಧವರು ಆಗಮಿಸಿ ಸಮಾವೇಶ ಯಶಸ್ವಿಗೆ ಶ್ರಮಿಸಬೇಕು ಎಂದು ಹೇಳಿದರು.
     ಸಭೆಯಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಸಮಾಜದ ಮುಖಂಡರಾದ ಮುತ್ತಣ್ಣ ಪ್ಯಾಟಿಗೌಡರ,ಸಿದ್ದಣ್ಣ ಚಿತ್ತರಗಿ,ಸಂಗಣ್ಣ ಡಂಬಳ,ಉಮ್ಮಣ್ಣ ಹೆಬ್ಬಾಳ, ಅಮರೀಶ ಡಂಬಳ,ನಾಗಪ್ಪ ಅಗಸಬಾಳ,ಉದಯ ಕುಪ್ಪಸ್ತ,ಯುವ
ಘಟಕದ ಅಧ್ಯಕ್ಷ ಶಿವಶಂಕರ ಪ್ಯಾಟಿಗೌಡರ,ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಪರವಾಗಿ ಶ್ರೀಗಳನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಶಂಕರ ಹೆಬ್ಬಾಳ, ಉಪಾಧ್ಯಕ್ಷ ರಮೇಶ ಹೆಬ್ಬಾಳ,ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ ಪ್ಯಾಟಿಗೌಡರ,ನಿರ್ದೇಶಕರಾದ ಶ್ರೀಕಾಂತ ಹೆಬ್ಬಾಳ,ದ್ಯಾವಪ್ಪ ಹುಣಶ್ಯಾಳ ಸೇರಿದಂತೆ ಉಪಸ್ಥಿತರಿದ್ದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಹಂಪಿ ಹೇಮಕೂಟ ಗಾಯತ್ರಿ ಮಹಾಸಂಸ್ಥಾನ ಗುರುಪೀಠದ ದಯಾನಂದಪುರಿ ಸ್ವಾಮೀಜಿಗಳನ್ನು ಬನಶಂಕರಿ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನಿಸಲಾಯಿತು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें