ಜನರ ಧ್ವನಿನ್ಯೂಸ್ ಮುದ್ದೇಬಿಹಾ
ರೈತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಣ್ಣೆತ್ತಿನ ಅಮವಾಸೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ತಯಾರಿಕೆ ಮಾರಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಪಾರಂಪರಿಕ ಕಸುಬನ್ನು ಉಳಿಸಿಕೊಂಡಿರುವ ಈ ಶ್ರಮಜೀವಿಗಳಿಗೆ ಮಣ್ಣೆತ್ತುಗಳ ಮಾರಾಟವೇ ಜೀವನೋಪಾಯದ ಪ್ರಮುಖ ಆಧಾರವಾಗಿದೆ.
ಮುದ್ದೇಬಿಹಾಳ ಪಟ್ಟಣ ಸೇರಿದಂತೆ ನಾಲತವಾಡ, ನಾಗಬೇನಾಳ ತಂಗಡಗಿ ನಿಡಗುಂದಿ ಹುಲುಗಬಾಳ ನಿಡಗುಂದಿ ಡವಳಗಿ ಸೇರಿದಂತೆ ವಿವಿಧ ಗ್ರಾಮಗಳ ಕುಂಬಾರರು ಬೇರೆ ಬೇರೆ ತರಗಳಿಂದ ಮಣ್ಣೆತ್ತುಗಳನ್ನು ತಯಾರಿಸುತ್ತಾಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಜೇಡಿ ಮಣ್ಣಿನ ಕೊರತೆ ತೀವ್ರವಾಗಿ ಕಾಡುತ್ತಿದೆ ಸೂಕ್ತ ಮಣ್ಣು ಸಿಗದ ಕಾರಣ ವಿವಿಧ ಜಮೀನುಗಳಿಂದ ಕಪ್ಪು ಮಣ್ಣನ್ನು ಸಂಗ್ರಹಿಸಿ ಹದಗೊಳಿಸಿ ಮಣ್ಣೆತ್ತುಗಳನ್ನು ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪಿಒಪಿ ಹಾಗೂ ಪ್ಲಾಸ್ಟಿಕ್ವಸ್ತುಗಳ ಬಳಕೆ ಹೆಚ್ಚಾಗಿದ್ದರೂ ಕುಂಬಾರರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಕೈಬಿಡದೆ ಮಡಿಕೆ,ಕುಡಿಕೆ, ಒಲೆ ಸೇರಿದಂತೆ ಹಲೋ, ವಿಧ ವಿಧವಾದಮಣ್ಣಿನ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಬದುಕಿಗೆ ಆರ್ಥಿಕ ಚೈತನ್ಯಇರುವುದರಿಂದ ಈ ಹಬ್ಬ ಕುಂಬಾರರ ಮಣ್ಣೆತ್ತುಗಳಿಗೆ ಹೆಚ್ಚಿನ ಬೇಡಿಕೆ ಮಣ್ಣೆತ್ತಿನ ಅಮವಾಸೆ ಸಂದರ್ಭನಿರಂತರವಾಗಿ ತೊಡಗಿದ್ದಾರೆ.
ಎಂಬ ಬೇಸರವನ್ನು ಕುಂಬಾರರು ವ್ಯಕ್ತಪಡಿಸುತ್ತಾರೆ. ಪಾರಂಪರಿಕ ವಾದ ಕಸುಬನ್ನು ಉಳಿಸಿಕೊಂಡು ಬದುಕು ಸಾಗಿಸುತ್ತಿರುವ ಕುಂಬಾರರಿಗೆ ಸರ್ಕಾರದಿಂದ ಅಗತ್ಯ ನೆರವು, ಉತ್ತಮ ಮಾರುಕಟ್ಟೆ ಹಾಗೂ ಗುಣಮಟ್ಟದ ಕಚ್ಚಾ ವಸ್ತುಗಳ ಲಭ್ಯತೆ ಲಭ್ಯತೆ ಇಲ್ಲದೆ ಇರುವದಿಂದ ಬದುಕು ಚಿಂತಾಜನಕವಾಗುತ್ತಿದೆ. ಎಂದು ಕುಂಬಾರ ಕುಟುಂಬದ ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.






