ಇಸ್ರೋ ‘ಯುವಿಕಾ-2026’ಕ್ಕೆ ಆಯ್ಕೆ: ಸಾಧಕ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರಗೆ ಪಟ್ಟಣದಲ್ಲಿ ಸನ್ಮಾನ

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಯುವ ವಿಜ್ಞಾನಿ ಕಾರ್ಯಕ್ರಮ’ (YUVIKA-2026) ಕ್ಕೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಗ್ರಂಥಿಕಾ ಕುಂಬಾರ ಆಯ್ಕೆಯಾಗುವ ಮೂಲಕ ಗ್ರಾಮ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ.
ವಿದ್ಯಾರ್ಥಿನಿಯ ಈ ವಿಶೇಷ ಸಾಧನೆಯನ್ನು ಮೆಚ್ಚಿ ಪಟ್ಟಣದ ಶ್ರೀ ಪವಾಡ ಬಸವೇಶ್ವರ ಆಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಕುಂಬಾರ ಸಮಾಜದ ವತಿಯಿಂದ ಸಿಹಿ ಹಂಚಿ, ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ 
ಮುಖ್ಯಗುರುಗಳಾದ ಶಿವಾನಂದ ಕುಂಬಾರ, ಮಾತನಾಡಿ ಸಮಾಜದ ಮುಖಂಡರು, ಪಟ್ಟಣದ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರ ಮಟ್ಟದ ಇಸ್ರೋ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಇದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಕುಂಬಾರ ಸಮಾಜದ ಹಿರಿಯರಾದ ಸಂಗಣ್ಣ ಕುಂಬಾರ,ಮುಖ್ಯಗುರುಗಳಾದ ಶಿವಾನಂದ ಕುಂಬಾರ, ಬಸವರಾಜ ಕುಂಬಾರ (ಗೋನಾಳ),ವಿದ್ಯಾರ್ಥಿನಿಯ ತಂದೆ ಮಂಜುನಾಥ ಕುಂಬಾರ,  ರಾಜಶೇಖರ ಕುಂಬಾರ, ಪತ್ರಕರ್ತ ಬಸವರಾಜ ಕುಂಬಾರ (ಚವನಭಾವಿ),
ಅಂಬಣ್ಣ ಕುಂಬಾರ,ಮಲ್ಲಣ್ಣ ಕುಂಬಾರ, ಶರಣಬಸಪ್ಪ ಕುಂಬಾರ, ಮುತ್ತು ಕುಂಬಾರ ಹಾಗೂ ವಿರೇಶ ಚಲವಾದಿ ಸೇರಿದಂತೆ ಸಮಾಜದ ಪ್ರಮುಖರು ಮತ್ತು ಹಿತೈಷಿಗಳು ಭಾಗವಹಿಸಿದ್ದರು.
——————————————
ಇಸ್ರೋ ‘ಯುವಿಕಾ’ ಕಾರ್ಯಕ್ರಮಕ್ಕೆ ಆಯ್ಕೆ: ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರಗೆ: ಕುಂಬಾರ ಸಮಾಜದಿಂದ ಗೌರವ ಸನ್ಮಾನ.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें