ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ, ಧ್ಯಾನವೇ ಪರಿಹಾರ: ಡಿ.ಎಂ.ಚೌದರಿ

ಜನರ ಧ್ವನಿ ನ್ಯೂಸ್ 

ಮುದ್ದೇಬಿಹಾಳ: ಇಂದಿನ ದಿನಮಾನಗಳಲ್ಲಿ ಮೊಬೈಲ್ ಅಬ್ಬರದ ನಡುವೆ ಮಕ್ಕಳು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಯೋಗ ಮತ್ತು ಧ್ಯಾನವೇ ಅತ್ಯುತ್ತಮ ಪರಿಹಾರ,” ಎಂದು ನಿವೃತ್ತ ಮುಖ್ಯಗುರು ಡಿ.ಎಂ. ಚೌದರಿ ಹೇಳಿದರು.

ಪಟ್ಟಣದ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ವತಿಯಿಂದ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಯೋಗದ ಪಾತ್ರ

​ಈಗಿನ ಪರಿಸರದಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್‌ಗಳ ದಾಸರಾಗುತ್ತಿದ್ದು, ಪಾಲಕರು ಅವರನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗಾ ಶಾಲೆಯು ಮಕ್ಕಳ ‘ಮೂರನೇ ಕಣ್ಣನ್ನು’ ತೆರೆಸಿ, ಅವರ ಮೆದುಳನ್ನು ಚುರುಕುಗೊಳಿಸುವ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಈ ವಿದ್ಯೆ ಪಡೆದ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಹೊಂದಲಿದ್ದಾರೆ ಎಂದು ಚೌದರಿ ವಿಶ್ವಾಸ ವ್ಯಕ್ತಪಡಿಸಿದರು.

ಮಾನಸಿಕ ಸದೃಢತೆಯ ಜವಾಬ್ದಾರಿ

​ಕಾರ್ಯಕ್ರಮದ ಮತ್ತೋರ್ವ ಅತಿಥಿ ಪ್ರೊ. ಪ್ರಕಾಶ ನರಗುಂದ ಮಾತನಾಡಿ, ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ನೀಡಿದರೆ ಸಾಲದು, ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನೆಯಲ್ಲಿ ಮೆದುಳನ್ನು ಚುರುಕುಗೊಳಿಸುವ ಎಲ್ಲ ತರಬೇತಿ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಅಂತಹ ವಿಶಿಷ್ಟ ವಿದ್ಯೆ ನಮ್ಮೂರಿನಲ್ಲೇ ಲಭ್ಯವಿರುವುದು ಪಾಲಕರ ಪುಣ್ಯ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಗೌರವ ಸಮರ್ಪಣೆ ಮತ್ತು ಕಿಟ್ ವಿತರಣೆ

​ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಯೋಗದ ಕಿಟ್‌ಗಳನ್ನು ವಿತರಿಸಲಾಯಿತು. ತರಬೇತಿ ಕೇಂದ್ರದ ಮುಖ್ಯಸ್ಥ ಹಾಗೂ ನಿವೃತ್ತ ಶಿಕ್ಷಕ ಎ.ಆರ್. ಮುಲ್ಲಾ ಅವರನ್ನು ಪಾಲಕರು ಸನ್ಮಾನಿಸಿ ಗೌರವಿಸಿದರು. ಅಲ್ಲದೆ, ತರಬೇತಿ ಪಡೆದ ನುರಿತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಕಂಟ್ರೋಲರ್ ಎಂ.ಎಸ್. ಪೊಲೇಶಿ, ಪಾಲಕರ ಪರವಾಗಿ ದೀಪಾ ಕುಲಕರ್ಣಿ, ವೈದ್ಯ ರಾಮನಗೌಡ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ದಾನಮ್ಮ ಶಿವಶಿಂಪಿ, ಸಿ.ಎಂ. ಹಿರೇಮಠ, ಶಾಂತಾ ಢವಳೇಶ್ವರ, ಎಂ.ಎ. ಹೊನವಾಡ, ಬಿ.ಆರ್. ರಕ್ಕಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶರಣಮ್ಮ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें