- ಮುದ್ದೇಬಿಹಾಳ : ಬಿ.ಎ.ಎಸ್ ಟ್ಯಾಲೆಂಟ್ಅವಾರ್ಡ ಎರಡನೆಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಜ್ಞಾನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿದರು. ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ಇದೆ ಭಾನುವಾರ ಹಮ್ಮಿಕೊಂಡಿದ್ದ ಬಿಎಎಸ್‌ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತರಾದವಿದ್ಯಾರ್ಥಿಗಳಿಗೆ ಪ್ರಶಸ್ತಿಪ್ರದಾನ ಮಾಡಿ ಅವರು ಮಾತನಾಡಿದರು.ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ 1080 ವಿದ್ಯಾರ್ಥಿಗಳ ಪೈಕಿ804 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಬರೆದಿದ್ದಾರೆ.40 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತರಗತಿಯೊಂದಕ್ಕೆವಿದ್ಯಾರ್ಥಿಗಳ೦ತೆ240ವಿದ್ಯಾರ್ಥಿಗಳು ಅಂಕಗಳಿಕೆ ಆಧಾರಮೇಲೆ ಶುಲ್ಕದಲ್ಲಿ ರಿಯಾಯಿತಿಗೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಪ್ರಭುಗೌಡಬಿರಾದಾರ ಮಾತನಾಡಿ, ಬಿಎಎಸ್ಶಾಲೆಯೂ ಎಂಟು ಎಕರೆ ವಿಸ್ತೀರ್ಣದಲ್ಲಿಅತ್ಯಾಧುನಿಕ ಸಕಲ ಸೌಲಭ್ಯಗಳನ್ನುಹೊಂದಿದೆ. ಕಳೆದ ವರ್ಷ 700ಕ್ಕೂ ಹೆಚ್ಚುವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಈವರ್ಷ ಸಂಖ್ಯೆ ನೂರು ಹೆಚ್ಚಾಗಿದೆ.ಕಲಿಕೆಗೆ ಪೂರಕವಾದ ವಾತವರಣದಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವದುನಮ್ಮ ಸಂಸ್ಥೆಯಪ್ರಥಮಾಧ್ಯತೆಯಾಗಿದ್ದುಪಾಲಕರ ವಿಶ್ವಾಸ ಉಳಿಸಿಕೊಳ್ಳಲಿದೆಎಂದು ಹೇಳಿದರು.ರಾಯಚೂರಿನ ನವೋದಯತರಬೇತಿದಾರ ಅಮರೇಶ ಪಾಟೀಲಮಾತನಾಡಿ, ಇಂದಿನ ಸ್ಪರ್ಧಾತ್ಮಕಯುಗದಲ್ಲಿ ವಿದ್ಯಾರ್ಥಿಗಳಿಗೆ ತಾಳ್ಮೆಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಾಲಕರು ಬೆಳೆಸಬೇಕಿದೆ. ಪಾಲಕರು ಒತ್ತಡಕ್ಕೊಳಗಾಗದೇ ಮಕ್ಕಳನ್ನುಬೆಳೆಸಬೇಕು. ಅಂಕಗಳಿಕೆಗಷ್ಟೇ ಮಕ್ಕಳನ್ನುಸಿಮೀತಗೊಳಿಸದೇ ಇನ್ನುಳಿದ ಚಟುವಟಿಕೆಗಳಲ್ಲೂ ಕೂಡಾ ಸಕ್ರಿಯರನ್ನಾಗಿಭಾಗವಹಿಸಲು ಅವಕಾಶ ನೀಡಬೇಕುಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಅಕ್ಷರ ದಾಸೋಹಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್,ಸಂಸ್ಥೆಯ ನಿರ್ದೇಶಕರಾದ ಗೀತಾಬಿರಾದಾರ, ಸುಮಂಗಲಾ ಬಿರಾದಾರ,ಮಾರ್ಗದರ್ಶಕ ಶಿವನಗೌಡ ಬಿರಾದಾರ,ಪ್ರಾಚಾರ್ಯ ರಷಿಕಾ ನಾಯಕ ಸೇರಿದಂತೆಶಿಕ್ಷಕ ವೃಂದ, ಆಡಳಿತ ಮಂಡಳಿಯವರುಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕವಿನಯ ಪಾಟೀಲ್ ಸ್ವಾಗತಿಸಿದರು.ರಾಜಮಾ ಕಂದಗಲ್ ನಿರೂಪಿಸಿ,ವ೦ದಿಸಿದರು.ಇದೇ ಸಂದರ್ಭದಲ್ಲಿವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರಮೆಡಲ್‌ಗಳನ್ನು ಪ್ರದಾನ ಮಾಡಲಾಯಿತು.
|
|
ಬಿ ಎ ಎಸ್ ಟ್ಯಾಲೆಂಟ್ ಪರೀಕ್ಷೆ 804 ವಿದ್ಯಾರ್ಥಿಗಳು ಬರೆದಿದ್ದಾರೆ
विज्ञापन बॉक्स (विज्ञापन देने के लिए संपर्क करें)






