ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ
ಪಾಟೀಲ್ ಆಕ್ಸ್ಫರ್ಡ್ ಶಾಲೆಯಲ್ಲಿ ಮಕ್ಕಳಿಗೆ ಪ್ರಾರಂಭದ ಹಂತದಿಂದಲೇ ಅತ್ಯಾಧುನಿಕ ತರಬೇತಿ ನೀಡುವ ಮೂಲಕ ಗುಣಮಟ್ಟ ಶಿಕ್ಷಣ ನೀಡುವೂದೇ ನಮ್ಮ ಆಕ್ಸ್ಫರ್ಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶವಾಗಿ ಈ ಹಿನ್ನೆಲೆ ಪ್ರತಿ ವರ್ಷ ನೂರಕ್ಕೂಹೆಚ್ಚು ವಿದ್ಯಾರ್ಥಿಗಳು ಅತಿ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಆಯ್ಕೆಗೊಳ್ಳುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿಯೇ ನಾಗರಬೆಟ್ಟ ಆಕ್ಸ್ಫರ್ಡ್ ಪಾಟೀಲ ಶಿಕ್ಷಣ ಸಂಸ್ಥೆಯ ವಿದ್ಯಾಕಾಶಿ ಎಂದು ಬಿಂಬಿತವಾಗಿದೆ ಎಂದು ನಾಗರಬೇಟ್ ಆಕ್ಸ್ಫರ್ಡ್ ಪಾಟೀಲ್ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಹೇಳಿದರು.ತಾಲೂಕಿನ ಬಿದರಕುಂದಿ ಹತ್ತಿರ ವಿರುವ ನಾಗರಬೆಟ್ ಆಕ್ಸಫಡ್ ಪಾಟೀಲ ಶಿಕ್ಷಣ ಸಂಸ್ಥೆಯ ಮುದ್ದೇಬಿಹಾಳ ಶಾಖೆಯಲ್ಲಿ ಭಾನುವಾರ 5ರಿಂದ10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಾಂಪಿಯನ್ಅವಾರ್ಡ ಪರೀಕ್ಷೇ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ಕಾಲೇಜಿನ ಆವರಣದಲ್ಲಿ ಏ.4 ರಂದು ಮೂರು ಕೋಟಿ ರೂ.ವೆಚ್ಚದ ನಗದು ಬಹುಮಾನ ಸಹಿತ ಶಿಷ್ಯವೇತನ ನೀಡುವ ಆಕ್ಸಫರ್ಡ್ ಪಾಟೀಲ್ಸ್ಜೀನಿಯಸ್ ಸ್ಪೂಡೆಂಟ್ ಆವಾರ್ಡ್ ಪರೀಕ್ಷೆ ನಡೆಸಲಾಗುತ್ತದೆ.ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ.ಈ ವರ್ಷದ ಜೆಇಇ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ.90ಕ್ಕೂ ಅಧಿಕ ಪರ್ಸೆಂಟೈಲ್‌ಅಂಕ ಬಂದಿವೆ.ಅದರಲ್ಲಿ ಮೂವರು ವಿದ್ಯಾರ್ಥಿಗಳುಜಿಲ್ಲೆಗೆ ಮೂರು ಸ್ಥಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು ಪ್ರಸಕ್ತ ವರ್ಷದಿಂದ ಜೆಇಇ ತರಬೇತಿಯನ್ನು ಮುದ್ದೇಬಿಹಾಳ ಶಾಖೆಯಲ್ಲಿ ಆರಂಭಿಸಲಾಗಿದೆ ಕಳೆದ ಐದು ವರ್ಷಗಳಿಂದ ಎಸ್.ಎಸ್.ಎಲ್.ಸಿಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳುತ್ತಾಬಂದಿದ್ದಾರೆ.2025ರಲ್ಲಿ ನಮ್ಮ ಸಂಸ್ಥೆ 187ಮೆಡಿಕಲ್ಸೀಟುಗಳನ್ನು ಪಡೆದುಕೊಂಡ ಹೆಗ್ಗಳಿಕೆ ನಮ್ಮಸಂಸ್ಥೆಯದ್ದಾಗಿದೆ.ಜತೆಗೆ ಬಾಗಲಕೋಟೆಯಲ್ಲಿಯೂ ಕೂಡ ನಮ್ಮಶಿಕ್ಷಣ ಸಂಸ್ಥೆಯ ಶಾಖೆ ಪ್ರಾರಂಭಿಸಲಾಗಿದೆ ಅದರಂತೆ ಜೆಇಇ ನೀಟ ಪರೀಕ್ಷೆ ಕುರಿತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ಟ್ಯಾಲೇಂಟ್ ಅವಾರ್ಡ್ ಮೂಲಕ ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಯಸುವಲ್ಲಿ ನಡೆಸಿದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದಕ್ಕೆ ಸಹಕಾರ ನೀಡಿದ ಎಲ್ಲ ಶಿಕ್ಷಕರ ಹಾಗೂ ಉಪನ್ಯಾಸಕರ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು. ಮಾಜಿ ಸೈನಿಕ ನಾಗಲಿಂಗಯ್ಯ ಮಠ ಅವರು ಮಾತನಾಡಿ ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿವೆ ಆದರೇ ನಾಗಬೆಸ್ಟ್ ಆಕ್ಷಪಡ್ ಪಾಟೀಲಶಿಕ್ಷಣ ಸಂಸ್ಥೆ ಕಾರ್ಯ ಸಾಧನೆ ಅಪಾರವಾಗಿದೆ.ಬೆಂಗಳೂರು ಮಂಗಳೂರರಂತ ದೊಡ್ಡ ಜಿಲ್ಲೆಗಳಲ್ಲಿಶಿಕ್ಷಣ ಸಂಸ್ಥೆಯನ್ನೇ ಅವಲಂಬಿತರಾಗಿ ಕುಳಿತುಕೊಳ್ಳಬೇಕಿತ್ತು ಇದರಿಂದ ನಿಜವಾದ ಬಡಕುಟುಂಭದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆದುಕೊಳ್ಳಲು ನೀಟ್ ನಂತಹ ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಬಾಗವಹಿಸಲು ಆದರೇ ಸಂಸ್ಥೆಯ ಮುಖ್ಯಸ್ಥರಾದ ಎಂ.ಎಸ್.ಪಾಟೀಲರ ಶಿಕ್ಷಣ ಪ್ರೇಮದ ಪರಿಶ್ರಮದಿಂದ ಸಾವಿರಾರು ವಿದ್ಯಾರ್ಥಿಗಳಿಗೆಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನಿಯಎಂದರು.ಈ ವೇಳೆ ಬಿ.ಎಚ್.ತಿಳಗೂಳ, ಸಂಗಮೇರ ಹೂಗಾರ,ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿದರು.ಕಾರ್ಯಕ್ರಮದಲ್ಲಿ ಢವಳಗಿ ಸ್ವತಂತ್ರಯ ಪಪೂ ಕಾಲೇಜಿನ ಪ್ರಾಚಾರ್ಯ ಎನ್.ಎ.ಬಿರಾಜದಾರ,ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ,ಶಿಕ್ಷಕರಾದ ರಾಜಶೇಖರ ಹಿರೇಮಠ,ಆನಂದನಾವಿ,ಸಿದ್ದನಗೌಡ ಕಾಶಿನಕುಂಟಿ ಮೊದಲಾದವರು ಇದ್ದರು.ಪರಶುರಾಮ ಹೂಗಾರ ಸ್ವಾಗತಿಸಿದರು.ಇಸ್ಮಾಯಿಲ್ ಮನಿಯಾರ್ ನಿರೂಪಿಸಿ ವಂದಿಸಿದರು.5 ರಿಂದ 10 ತರಗತಿಯವರೆಗೆ ಆಕ್ಸಫರ್ಡ್ಪಾಪಾಟೀಲ್ಸ್ ಚಾಂಪಿಯನ್ಸ್ ಪರೀಕ್ಷೆಯಲ್ಲಿ 912ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಅದರಲ್ಲಿ ಎಲ್ಲ ತರಗತಿಗೆ 11 ವಿದ್ಯಾರ್ಥಿಗಳಂತೆ ಒಟ್ಟು 55ವಿದ್ಯಾರ್ಥಿಗಳನ್ನು 10 ಲಕ್ಷ ರೂ.ವೆಚ್ಚದ ಶಿಷ್ಯವೇತನಕ್ಕೆಆಯ್ಕೆ ಮಾಡಲಾಯಿತು. ವಿಶೇಷವೆಂದರೆ ಕರ್ನಾಟಕ ಭಾಗದ ಹಲವುಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.






