ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ವನಮಹೋತ್ಸವದಲ್ಲಿ ಬಾವೋಬಾಬ್ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.

  ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ವನಮಹೋತ್ಸವದಲ್ಲಿ ಬಾವೋಬಾಬ್ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.
————
ಮುದ್ದೇಬಿಹಾಳ:
ಬಾವೋಬಾಬ್ ಮರಗಳು ಅತೀ ದೀರ್ಘ ಕಾಲದ ಆಯುಷ್ಯ ಹೊಂದಿದ್ದು, ಅವುಗಳ ನೆಡುವಿಕೆಯಿಂದ ಅಂತರ್ಜಲ ಹೆಚ್ಚಲಿದೆ ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಹೇಳಿದರು.
ಅವರು ಬುಧವಾರ, ಬಿದರಕುಂದಿ ಬೆಟ್ಟದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೃಕ್ಷೋದ್ಯಾನದಲ್ಲಿ ಗಿಡಗಳನ್ನು ನೆಡುವ ಹಾಗೂ ಅದರ ಸೌಂದರ್ಯ ಹೆಚ್ಚಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದರು.
ಅರಣ್ಯ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ, ರಾಜೇಂದ್ರ ಹುನ್ನೂರ, ಅರಣ್ಯ ಇಲಾಖೆಯ ವಿಠ್ಠಲ ಬೋರಟಗಿ, ವಿಜಯಕುಮಾರ್ ಕಿತ್ತೂರ, ಯಲಗೂರಪ್ಪ, ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ, ಕಾರ್ಯದರ್ಶಿ ಅಮರೇಶ ಗೂಳಿ, ಸಂಚಾಲಕ ಮಹಾಬಲೇಶ್ವರ ಗಡೇದ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರವಿ ಗೂಳಿ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವಿಲಾಸರಾವ್ ದೇಶಪಾಂಡೆ, ವೆಂಕನಗೌಡ ಪಾಟೀಲ, ಅಮರೇಶ ಐಹೊಳೆ, ಕಿರಣ ಪಾಟೀಲ, ವಿನಯ ಹಿರೇಮಠ, ಮಹಾಂತೇಶ ಬಸನಗೌಡ್ರ, ಈರಯ್ಯ ಮಠ, ಆದೇಶ ಕೋಳೂರ, ರೇಶ್ಮಾ ಮಾಳನೂರ ಬಿದರಕುಂದಿ, ಸೀತಿಮನಿ, ಚಿಕ್ಕ ನರಗುಂದ, ಮತ್ತಿತರರು ಇದ್ದರು. ಪರಮಾನಂದ ಪಾಟೀಲ ಪ್ರಾರ್ಥಿಸಿದರು. ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें