ವಿಪ್ರ ಸಮಾಜದವರು ಉಪತಹಶೀಲ್ದಾರಗೆ ಮನವಿ ಸಲ್ಲಿಸಿದರು.

  ವಿಪ್ರ ಸಮಾಜದವರು ಉಪತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಮುದ್ದೇಬಿಹಾಳ: ಸನಾತನ ಧರ್ಮ ಜಗತ್ತಿಗೆ ಆದರ್ಶವಾಗಿದೆ. ಆದರೆ ಆಳುವ ಸರ್ಕಾರಗಳು ತಮ್ಮ ಸ್ಥಾರ್ಥಕ್ಕಾಗಿ ಜಾತಿ ಜಾತಿಗಳ ಮಧ್ಯೆ ಕಲಹ ಹಚ್ಚಿ ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಹೇಳಿದರು. ಗುರುವಾರ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಮುಖ್ಯಮಂತ್ರಿ ಅವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಮಾತನಾಡುತ್ತ ಬ್ರಾಹ್ಮಣ ಸಮಾಜದಲ್ಲಿ ಯಾವುದೇ ರೀತಿಯ ಉಪ ಜಾತಿಗಳು ಇರುವುದಿಲ್ಲ.  ಜಾತಿ ಸಮೀಕ್ಷೆಯಲ್ಲಿ ಬ್ರಾಹ್ಮಣ ಕ್ರಿಸ್ಚಿಯನ್, ಬ್ರಾಹ್ಮಣ ಮುಜಾವರ ಮುಸ್ಲಿಂ, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್ ನಮೂದಿಸಿದ್ದು ಇದಕ್ಕೆ ಆಕ್ಷೇಪಣೆ ಇದೆ ಎಂದು ಅಸಮಾಧಾನ ಹೊರಹಾಕಿದರು. ನಮ್ಮ ಬ್ರಾಹ್ಮಣ ಸಮಾಜದಲ್ಲಿ ಹಿಂದೂ ಬ್ರಾಹ್ಮಣ ಅಂತ ಮಾತ್ರವಿದೆ. ಜಾತಿ ಸಮೀಕ್ಷೆ ಪಟ್ಟಿಯಲ್ಲಿ ಇಲ್ಲದ ಉಪಜಾತಿಗಳನ್ನು ಸೇರಿಸಲಾಗಿದೆ. ಇದನ್ನು ಕೈ ಬಿಡಬೇಕು. ಎಲ್ಲಾ ಬ್ರಾಹ್ಮಣ ಸಮಾಜದವರು ಕ್ರಮಸಂಖ್ಯೆ 210 ರಲ್ಲಿ ಹಿಂದೂ ಬ್ರಾಹ್ಮಣ ಎಂದೇ ಬರೆಸಬೇಕು ಎಂದು ಕೋರಿದರು. ಪ್ರಮುಖರಾದ ಅರವಿಂದ ಕುಲಕರ್ಣಿ, ಪಿ.ಎನ್ ಕುಲಕರ್ಣಿ, ಪುಟ್ಟು ಕುಲಕರ್ಣಿ ಮಾತನಾಡಿ ಈ ತಿಂಗಳು 22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲಾಗುತ್ತಿದೆ.  ಬ್ರಾಹ್ಮಣ ಸಮಾಜದವರು ಜಾಗ್ರತರಾಗಿ ಹಿಂದು ಬ್ರಾಹ್ಮಣ ಎಂದೆ ಬರೆಸುವಂತೆ ಮನವಿ ಮಾಡಿದರು. ಮನವಿ ಪತ್ರವನ್ನು ಶಿರಸ್ತೆದಾರ ಎಂ.ಎ ಬಾಗೇವಾಡಿ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಉಪಾಧ್ಯಕ್ಷ ಎಲ್.ಎಸ್.ದೇಶಪಾಂಡೆ, ವಿ.ಎಸ್.ಕುಲಕರ್ಣಿ, ಎಂ. ಆರ್.ದೇಶಪಾಂಡೆ, ಪಿ.ಎಂ.ದೇಶಪಾಂಡೆ, ಅನೀಲ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರದೀಪ ಕುಲಕರ್ಣಿ, ಬಲವಂತರಾಯ ದೇಶಪಾಂಡೆ, ಎಂ‌‌.ಕೆ.ಕುಲಕರ್ಣಿ, ಉಲ್ಲಾಸ ಕುಲಕರ್ಣಿ, ವಾಸು ಸಾಲೋಡಗಿ,ಕೃಷ್ಣ ಕುಲಕರ್ಣಿ, ಆನಂದ ಜಂಬಗಿ ,ಆರ್.ಎನ್.ಜೋಷಿ, ಜಿ.ಆರ್.ಕುಲಕರ್ಣಿ ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು ಭಾಗವಹಿಸಿದ್ದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें