ಮುದ್ದೇಬಿಹಾಳ ತಂಗಡಗಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕೋತ್ಸವದ ಸಾದಾರಣ ಸಭೆ. ಮುದ್ದೇಬಿಹಾಳ: ತಂಗಡಗಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ೭೭ನೇ ವಾರ್ಷಿಕೋತ್ಸವದ ಸಾದಾರಣ ಸಭೆ ನಡೆಸಿದರು ಈ ವೇಳೆ ವಾಷೀಕ ಬಂಡವಾಳ, ಶೇರು ಬಂಡವಾಳ ಲಾಭಾಂಶ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ರೈತರಲ್ಲಿ ಅರಿವೂ ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಂಗಡಗಿ ಗ್ರಾಮದ ವಿವಿದುದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಶ್ರೀಶೈಲ ಮರೋಳ ಅವರು ಮಾತನಾಡಿ ಬೆಳವಣಿಗೆಗೆ ರೈತರೇ ಸಂಘದ ಬೆನ್ನೆಲುವಾಗಿ ಸಂಘದ ಏಳಿಗೆಗೆ ಏಕತೆಗೆ ಎಲ್ಲರು ಸಹಕರಿಬೇಕೆಂದು ಹೇಳಿದರು. ಪ್ರಸ್ತುತ ಈ ವಾರ್ಷಿಕ ವರ್ಷದಲ್ಲಿ ಸುಮಾರು 593.98 ಲಕ್ಷ ಹಣವನ್ನು ಅಲ್ಪಾವದಿ, ಕೃಷಿ ಚಟುವಟಿಕೆ ಹಾಗೂ ಟ್ರ‍್ಯಾಕ್ಟರ್ ಖರೀದಿಗಾಗಿ ಸಾಲವನ್ನು ನೀಡಲಾಗಿದ್ದು ಈ ವರ್ಷದಲ್ಲಿ 10.17ಲಕ್ಷ ಲಾಭ ಗಳಿಕೆ ಯಾಗಿದ್ದು 121.75 ಲಕ್ಷ ಶೇರು ಬಂಡವಾಳವನ್ನು ಹೊಂದಿ ಸಾಲ ವಸೂಲಾತಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಿದ ಹೆಮ್ಮಯು ನಮ್ಮ ಸಹಕಾರ ಸಂಘಕ್ಕೆ ಮಾತ್ರವಲ್ಲದೇ ರೈತರು ಸಲ್ಲುತ್ತದೆ ಎಂದರು. ಸಂಘದ ಹಿರಿಯ ಸದಸ್ಯ ಸಹಕಾರಿ ಬಸವರಾಜ ಇಸ್ಲಾಂಪುರ ಮಾತನಾಡಿ ರೈತರಲ್ಲಿ ಸಹಕಾರಿ ಸಂಘದಲ್ಲಿ ವಿಶ್ವಾಸವಿರಲಿ. ಇಷ್ಟು ದಿನ ಎಲ್ಲ ವಿಧಗಳಲ್ಲೂ ರೈತರು ಸಹಕರಿಸಿದ್ದರಿಂದಲೆ ಸಂಘದ ಏಳಿಗೆ ಕಾಣುವಂತಾಗಿದೆ. ಇದೇ ರೀತಿ ಸಹಕಾರ ಮನೋಭಾವನೆಯೊಂದಿಗೆ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಲುಸ್ಪೂರ್ತಿಯಾಗಬೇಕು ಎಂದರು. ನಿರ್ದೇಶಕ ಮಂಡಳಿ ಸದಸ್ಯರಾದ ಮಲಿಕಸಾಬ ನದಾಫ, ಮಾಂತೇಶ ಹೊಳಿ, ಸಂಗಯ್ಯ ಸಾರಂಗಮಠ,ಗುರನಗೌಡ ಕರಿ, ಶಿವಯೋಗಿ ಹೊಳಿ,ನಿಜಗುಣಪ್ಪ ವಾಲಿಕಾರ, ಜಯಶ್ರೀ ಮೇಟಿ, ಸುನಂದಾ ನಿಡಗುಂದಿ, ಮಾಂತೇಶ ಛಲವಾದಿ, ಹಾಗೂ ವೃತ್ತಿಪರ ನಿರ್ದೇಶಕರಾದ ದರಿಯಪ್ಪ ದೇಶಣಗಿ ಸಂಘದ ಮುಖ್ಯ ಕಾರ್ಯದರ್ಶಿ ಸಂಗಣ್ಣ ನಿಡಗುಂದಿ, ಬಸವರಾಜ ಲಿಂಗದಳ್ಳಿ ಹಣಮಂತ್ರಯ ಹೊಳಿ, ಮುಖಂಡರಾದ ರಾಜೂಗೌಡ ಕೊಂಗಿ, ಮೋಟಗಿ, ಬಸವರಾಜ್ ತಾಳಿಕೋಟಿ, ಶಂಕ್ರಪ್ಪ ಹೊಳಿ,ಸಂಗಣ್ಣ ದೇವರಮನಿ, ಪರಪ್ಪ ಹೊಳಿ, ಶಿವಾನಂದ್ ಮಂಕಣಿ, ರಾಮಣ್ಣ ಕುಂಟೋಜಿ, ಬಸಂಗಣ್ಣ ಕವಡಿಮಟ್ಟಿ, ಕೆಂಚಪ್ಪ ಲಕ್ಕಣ್ಣವರ, ರಾಜುಧಣಿ ದೇಶಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.