ಹಿಂದೂ ಮಹಾಗಣಪತಿ ಉತ್ಸವ ಸಮಿತಿ ರಚನೆ

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ರಚನೆ

ಮುದ್ದೇಬಿಹಾಳ: ನಗರದಲ್ಲಿ ಸ್ಥಾಪನೆಯಾಗುವ ಗಣಪತಿ ಮಂಡಲಗಳು ಒಟ್ಟಾಗಿ ಸೇರಿ ಇಂದು ಮಹಾಗಣಪತಿ ಉತ್ಸವ ಸಮಿತಿಯನ್ನು ರಚನೆ ಮಾಡಿ, ಸೈನಿಕ ಮೈದಾನದಲ್ಲಿ ಪ್ರಸಕ್ತ ವರ್ಷದಿಂದ ಗಣಪತಿಯನ್ನು ಸ್ಥಾಪನೆ ಮಾಡುವ ಮೂಲಕ ವಿದ್ಯುಕ್ತವಾಗಿ ಪ್ರಾರಂಭ ಮಾಡಲಾಯಿತು.

ಮೊದಲ ದಿನ ಗೋ ಪೂಜೆಯೊಂದಿಗೆ ಆರಂಭ, ದ್ವಂದಾರ್ಥ, ಕೆಟ್ಟ ಹಾಡುಗಳಿಲ್ಲದ, ಕುಡಿತ, ಕುಣಿತಗಳಿಂದ ವರ್ಜಿತವಾದ, ಸಾಂಪ್ರದಾಯಿಕ ಮಣ್ಣಿನ ಗಣಪತಿಯನ್ನು ಸಾಂಪ್ರದಾಯಿಕ ವಾದನಗಳ ಸಹಿತ ಹಿಂದೂ ಸಂಪ್ರದಾಯಗಳ ಆಧಾರದಲ್ಲಿ ಕೂಡ್ರಿಸಲಾಗುತ್ತಿದೆ. ಪ್ರತಿದಿನ ಸಂಜೆ ದೇಶಕ್ಕಾಗಿ ದುಡಿದು ಮಡಿದವರ ಕುರಿತು ಉಪನ್ಯಾಸ ಗಳು, ಅವರ ಕುಟುಂಬದವರಿಗೆ ಸನ್ಮಾನಗಳು, ಆಪರೇಷನ್ ಸಿಂಧೂರ ಕುರಿತು ಅನುಭವ ಕಥನ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತವೆ ಎಂದು ಸಂಂಘಟಕರು ತಿಳಿಸಿದ್ದಾರೆ.
ಸತತ ಏಳು ದಿನಗಳವರೆಗೆ ಒಟ್ಟು ೧೪ ಪೂಜೆಗಳಿಗೆ ಅವಕಾಶವಿರುತ್ತದೆ. ಕಾರಣ. ಪೂಜೆ ಮಾಡಲಿಚ್ಚಿಸುವವರು ಸಂಪರ್ಕಿ ಸಂಖ್ಯೆ (1) ಮಾಣಿಕಚಂದ ದಂಡಾವತಿ ಮೋ:944816763 (2) ಬಸವರಾಜ ನಂದಿಕೇಶ್ವರಮಠ. 9740491998 ಸಂಪರ್ಕಿಸಲು ಕೋರಲಾಗಿದೆ.
ಪೂಜಾ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಪ್ರಭು ಕಡಿ ಬಸವರಾಜ ನಾಲತವಾಡ ಪುಟ್ಟು ಕುಲಕರ್ಣಿ, ವೆಂಕನಗೌಡ ಪಾಟೀಲ್. ರಾಜೇಂದ್ರಗೌಡ ರಾಯ್ಗೊಂಡ. ಕೃಷ್ಣ ಬಿಳೆಬಾವಿ ಮಾಂತು ಬೂದಿಹಾಳಮಠ. ರಾಜಶೇಖರ್ ಮ್ಯಾಗೇರಿ ಸೇರಿದಂತೆ ರಾಯರ ಮಠದ ಪೂಜಾರಿಗಳು ವಿದ್ಯುಕ್ತವಾಗಿ ವೇದಘೋಷ ಮಂತ್ರದೊಂದಿಗೆ ಗಜಾನನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें