ಭೂ ಪರಿಹಾರ ಪಡೆಯಿರಿ ಆದರೆ ಒಪ್ಪಿಗೆ ಕೊಡಬೇಡಿ ಎ ಎಸ್ ಪಾಟೀಲ್ ನಡಹಳ್ಳಿ

ಜನರ ಧ್ವನಿ ನ್ಯೂಸ್

ಮುದ್ದೇಬಿಹಾಳ: ತಾಲೂಕಿನ ಚಿಮ್ಮಲಗಿ ಏತ ನೀರಾವರಿ ಯೋಜನೆಗೆ 2012ರಲ್ಲಿ ಭೂ ಸ್ವಾಧೀನ ಹಾಗೂ ಪರಿಹಾರದ ದರ ನಿಗದಿಪಡಿಸಲಾಗಿದ್ದು, ಅದೇ ದರದಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡದೇ ನ್ಯಾಯಾಲಯದಲ್ಲಿ ಪರಿಹಾರ ವಿಳಂಬ ನೀತಿ ಅನುಸರಿಸುತ್ತಿದೆ. ಅಲ್ಲದೆ ಈಗ ಪರಿಹಾರ ನೀಡುತ್ತೇವೆ ಅದಕ್ಕೆ ಒಪ್ಪಿಗೆ ಕೊಡಿ ಎಂದು ರೈತರನ್ನು ಕೇಳುತ್ತಿದೆ. ಇದಕ್ಕೆ ರೈತರಿಂದ ಒಪ್ಪಿಗೆ ಸಹಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದು ರೈತರು ಪರಿಹಾರ ಕೊಡುತ್ತಿದ್ದರೆ ತೆಗೆದುಕೊಳ್ಳಿ ಆದರೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಡಿ ಎಂದು ರಾಜ್ಯ ಭಾಜಪ ರೈತ ಮೋರ್ಚ ಅಧ್ಯಕ್ಷ ಎ.ಎಸ್.ಪಾಟೀಲ್‌ ನಡಹಳ್ಳಿ ಹೇಳಿದರು. ತಮ್ಮ ಸ್ವಗ್ರಹ ದಾಸೋಹ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು, ಮಾತನಾಡಿದ ನ್ಯಾಯಾಲಯದಲ್ಲಿ ಒಂದು ದಶಕದಿಂದ ರಾಜ್ಯ ಸರ್ಕಾರ ಪರಿಹಾರ ಧನ ನೀಡದೆ ಮೇಲ್ಮನವಿ ಸಲ್ಲಿಸುತ್ತಿದೆ ಈಗ ಪರಿಹಾರ ನೀಡುವುದಕ್ಕೆ ರೈತರ ಒಪ್ಪಿಗೆ ಕೇಳಿ ಸಹಿ ಪಡೆಯಲು ಅಧಿಕಾರಿಗಳಿಗೆ ತಿಳಿಸಿದೆ. ಈಗ ಬಿಡದಿ ಜಮೀನು ಸ್ವಾಧೀನ ಪ್ರಮಾಣದಲ್ಲಿ ಪರಿಹಾರ ನೀಡುವುದಿದ್ದರೆ ಇಂದಿನ ದರಕ್ಕೆ ಪರಿಹಾರ ನೀಡಲಿ. ಅಲ್ಲಿ ಎಕರೆಗೆ ಎರಡು ಕೋಟಿ ಪರಿಹಾರ ನೀಡುತ್ತಿದೆ. ಇಲ್ಲಿ ಒಂದು ಕೋಟಿ ಪರಿಹಾರ ನೀಡಲು ಮೀನಮೇಷ ಪರಿಹಾರ ನೀಡಲಿ, ಎಣಿಸುತ್ತಿದೆ. ಹೀಗಾಗಿ ಸಾಧ್ಯವಾದರೆ ರೈತರಿಗೆ ಸಹಿ ಹಾಕಿಸಿಕೊಳ್ಳದೆ ಪರಿಹಾರ ನೀಡಲಿ, ಮುಂದಿನ ಸರಕಾರ ಬಂದಾಗ ಹೆಚ್ಚುವರಿ ಪರಿಹಾರ ನೀಡುತ್ತೇವೆ. ರೈತರಿಂದ ಒಪ್ಪಿಗೆ ಪತ್ರ ಪಡೆದು ಕಣ್ಮರೆಸುವ ತಂತ್ರ ಮಾಡಬಾರದು ಎಂದರು.

ಈ ಸಂದರ್ಭದಲ್ಲಿ ವೀರೇಶ ಪಾಟೀಲ, ಎ.ಬಿ.ಪಾಟೀಲ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಶ್ರೀಶೈಲ ದೊಡಮನಿ, ಮಲ್ಲಿಕಾರ್ಜುನ ಪಾಟೀಲ,ತಂಗಡಗಿ, ಸೋಮನಗೌಡ ಸಿದ್ದರಾಜ ಹೊಳಿ, ಲಕ್ಷ್ಮಣ ಬಿಜೂರ, ಸಂಗಣ್ಣ ಹತ್ತಿ, ಸಂಗಮ್ಮ ದೇವರಹಳ್ಳಿ ಗೌರಮ್ಮ ಹುನಗುಂದ, ಅಶೋಕ ರಾಥೋಡ ಇದ್ದರು.

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें