ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ : ತಾಲೂಕಿನ ಕಾಳಗಿ ಹಾಗೂ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಜನಸ್ನೇಹಿಯಾಗಿ ಸೇವೆ ಸಲ್ಲಿಸಿದ್ದ ವೈದ್ಯರನ್ನು ಸರ್ಕಾರ ಮುದ್ದೇಬಿಹಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಸಂಘಟನೆ ಮುಖಂಡರು, ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಸೇರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡರು.
ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಮುತ್ತು ಟಕ್ಕಳಕಿ, ಮಾತನಾಡಿ ವೈದ್ಯರು ಕಾಳಗಿ ಹಾಗೂ ನಾಲತವಾಡ ಪ್ರದೇಶಗಳಲ್ಲಿ ತಮ್ಮ ಸೇವಾ ಮನೋಭಾವದಿಂದ ಜನಮನ ಗೆದ್ದಿದ್ದಾರೆ. ಬಡವರು, ಗರ್ಭಿಣಿಯರು ಸೇರಿದಂತೆ ಹಲವರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿದ್ದರು, ಇದೀಗ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ಅವರ ನೇಮಕ ಸಂತೋಷದ ವಿಷಯವಾಗಿದ್ದು, ಅಲ್ಲಿ ಕೂಡ ಹೆಚ್ಚಿನ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದ ಅವರು ಸಾರ್ವಜನಿಕರು ವೈದ್ಯರ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜೊತೆಗೆ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಹಾಗೂ ವೈದ್ಯರ ಹೆಸರು ರಾಜ್ಯ ಮಟ್ಟದಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿರೇಶ ಆಲಕೊಪ್ಪರ, ಹಣಮಂತ ಕೇಸಾಪುರ, ಅಲ್ಲಾಭಕ್ಷ, ಶಿವು ವನಕಿಹಾಳ, ಅಂಬರಿಷ ಡೊಂಕಮಡು, ಮಹಾಂತೇಶ ಹಡಪದ, ಮುಸ್ತಾಕ್ ತೋರಗಲ್ಲ, ಜಿ.ಹೆಚ್. ಓಲೇಕಾರ, ವಿರೇಶ ಜಂಜಿಗಡ್ಡಿ, ಆನಂದ ಮಂಕಣಿ, ಸಂತೋಷ ನಾಗರಬೆಟ್ಟ, ಅಲ್ಲಾಭಕ್ಷ ಕೊಗಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆದರೆ, ಈ ವರ್ಗಾವಣೆ ಬಗ್ಗೆ ಸ್ಥಳೀಯರಾದ ವಿರೇಶ ಆಲಕೋಪ್ಪರ ಮಾತನಾಡಿ ಸ್ಥಳೀಯರಲ್ಲಿ ಬೇಸರವೂ ವ್ಯಕ್ತವಾಗಿದೆ. ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈ ವೈದ್ಯರ ಸೇವೆ ಅತ್ಯಂತ ಅಗತ್ಯವಾಗಿತ್ತು. ಅವರ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮೀಪದಲ್ಲೇ ಉತ್ತಮ ಚಿಕಿತ್ಸೆ ಸಿಗುತ್ತಿತ್ತು. ಇಂತಹ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಿರುವುದು ಸ್ಥಳೀಯ ಜನರಿಗೆ ಆಘಾತ ಉಂಟುಮಾಡಿದ್ದು, ಸರ್ಕಾರ ಈ ವಿಷಯವನ್ನು ಪರಿಗಣಿಸಿ ನಾಲತವಾಡ ಆಸ್ಪತ್ರೆಗೆ ಇನ್ನಷ್ಟು ವೈದ್ಯರನ್ನು ನೇಮಕ ಮಾಡಬೇಕು ಎಂಬ ಒತ್ತಾಯಿಸಿದ್ದಾರ ಒಟ್ಟಾರೆ, ವೈದ್ಯರ ಸೇವೆಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ, ಅವರ ವರ್ಗಾವಣೆಯಿಂದ ಉಂಟಾದ ಸೇವಾ ಕೊರತೆ ಕುರಿತು ಜನರು ಆತಂಕ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.






