ಜನರ ಧ್ವನಿ ನ್ಯೂಸ್
ಮುದ್ದೇಬಿಹಾಳ: ದೇಶ,ಧರ್ಮದ ಬಗ್ಗೆ ಆಫ್ ಕೆಲವರು ಅಸಡ್ಡೆಬೆಳೆಸಿಕೊಳ್ಳುತ್ತಿದ್ದಾರೆ.ವಿದೇಶಿಗರುಆದು,ಭಾರತದತ್ತ ನೋಡುತ್ತಿದ್ದಾರೆ. ಸಂಸ್ಕೃತ, ಯೋಗ,ಗಣಿತ, ವಾಯುಯಾನ, ಅದೃಶ್ಯಯುದ್ಧ ಪರಿಚಯಿಸಿದ ದೇಶಕ್ಕೆ ಭವ್ಯಭವಿಷ್ಯವಿದೆ ಎಂದು ಡಾ.ಹಣಮಂತ ಮಳಲಿ ಹೇಳಿದರು.ವಿಬಿಸಿ ಹೈಸ್ಕೂಲ್ ಮೈದಾನದಸಿದ್ದೇಶ್ವರ ವೇದಿಕೆಯಲ್ಲಿ ನಡೆದಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತನ್ನುಬೆರಗು ಮಾಡುವಷ್ಟು ದೇಶದಲ್ಲಿ ಇದೆ. ಪುರಾಣ,ಪುಣ್ಯಕತೆ, ಭಗವದ್ಗೀತೆ ಕಲಿಯುತ್ತಾ ಮಕ್ಕಳು ಬೆಳೆಯಬೇಕು. ಸಮಾಜ ಬಂಧುಗಳು ಒಗ್ಗಟ್ಟು ಬರಲಿ.ಇದರಿಂದ ಇತರ ಧರ್ಮೀಯರು ನಮ್ಮನ್ನು ಹಿಂಬಾಲಿಸುವರು.ದೇಶದಲ್ಲಿ ಒಬ್ಬನೇ ಹಿಂದೂ ಇದ್ದರೂ ಧರ್ಮವನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.ಮಹಿಳಾ ಪ್ರತಿನಿಧಿ ಜಯಶ್ರೀಸಾಲಿಮಠ ಮಾತನಾಡಿ, ನೂರಾರುವರ್ಷಗಳ ತ್ಯಾಗ, ತಪಸ್ಸು ಉದಾರಸಂವಿಧಾನದ ಕೊಡುಗೆ ಕಾರಣದಿಂದದೇಶ ಇಂದು ಭದ್ರವಾಗಿದೆ.ಸ್ವಾಭಿಮಾನ, ಏಕತೆ, ಹೋರಾಟದಿಂದಹಿಂದೂ ಸಮಾಜ ಜಾಗೃತವಾಗಿದೆ.ಇದು ಬೆಳವಣಿಗೆಯ ಸಂಕೇತ.ಸಮೃದ್ಧವಾಗಿ ಅನುಭವಿಸುತ್ತಿರುವನಾವು, ಭಾರತ ಮಾತೆಯ ಋಣ ತೀರಿಸಲು ಸಿದ್ಧವಾಗಬೇಕು ಎಂದು ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ತಾಳಿಕೋಟೆ ಖಾಸಗತೇಶ್ವರ ಮಠದ ಸಿದ್ದಲಿಂಗದೇವರು ಆಶೀರ್ವಚನ ನೀಡಿದರು.ಬನಶಂಕರಿ ದೇವಸ್ಥಾನ ದಿಂದಪ್ರಾರಂಭವಾಗಿ ನೂರಾರು ಸಂತರು50ಕ್ಕೂ ಹೆಚ್ಚು ಸಮಾಜಗಳ ಅಧ್ಯಕ್ಷರು,ಸುಮಾರು 10 ಸಾವಿರಕ್ಕಿಂತ ಹೆಚ್ಚುಜನ ಭಾಗವಹಿಸಿದ್ದರು.ಸಮ್ಮೇಳನದಅಧ್ಯಕ್ಷರಾದ ಬಸವರಾಜ್ ನಾವದಗಿ, ಪ್ರಭು ಕಡಿ ಉಪಾಧ್ಯಕ್ಷರಾದ ಅಶೋಕ್ ಮಣಿ,ಬಿ.ಎಸ್ .ಮೇಟಿ, ಕಾರ್ಯದರ್ಶಿಶ್ರೀಕಾಂತ್ ಹಿರೇಮಠ, ಖಜಾಂಚಿಸುಭಾಷ್ ಕುಲಕರ್ಣಿ ಶಾಲಾ ಉಪ ಪಂಗಡಗಳ ಅಧ್ಯಕ್ಷರುಗಳು ವಿವಿಧಸಮಿತಿಗಳ ಸದಸ್ಯರು ವೇದಿಕೆಯಲ್ಲಿಇದ್ದರು.ಮುಖಂಡರಾದಪರಶುರಾಮ್ ಪವಾರ, ಭರತ ಪಾಟೀಲ್, ರಾಹುಲ ನಾಡಗೌಡ, ದಾನಯ್ಯ ಹಿರೇಮಠ,ಪ್ರಭುರಾಜ್ ಕಲಬುರ್ಗಿ, ವಿಕ್ರಂಓಸಾಲ್, ಮಣಿಕಚಂದ ದಂಡಾವತಿ,ಬಹದ್ದೂರ್ ರಾಥೋಡ್, ಶಶಿಕಾಂತಮಾಲಗತ್ತಿ, ಪರುಶುರಾಮ ವಡ್ಡರ,ವೆಂಕನಗೌಡ ಪಾಟೀಲ, ರವಿ ವಡ್ಡರ, ಮಂಜುನಾಥ ಚಟ್ಟರ್, ಸುರೇಶ ಕಲಾಲ, ರಾಮಣ್ಣಗೊಲ್ಲರ, ನಾರಾಯಣ ದುರ್ವೆ,ಶಂಕ್ರಪ್ಪ ಹಡಪದ, ಸುಜಾರಾಮ್ ಸೇರಿದಂತೆ ಜನಪದ ಹಾಗೂಸಂಗೀತ ತಂಡಗಳು ಉಪಸ್ಥಿತರಿದ್ದರು.







