ಗುರು ನಮನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗುರು ನಮನ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಸಾಮೂಹಿಕವಾಗಿ ಉದ್ಘಾಟಿಸಲಾಯಿತು.
ಮುದ್ದೇಬಿಹಾಳ: ಗುರು ನಮನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಮುದ್ದೇಬಿಹಾಳ: ನಾವು ಬೆಳೆದು ಬಂದ ದಾರಿ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ವಿದ್ಯೆ ನೀಡಿದ ಗುರುಗಳು, ಮುನ್ನಡೆಸಿದ ಮಾರ್ಗದರ್ಶಕರು, ಸಕಾಲಕ್ಕೆ ನೆರವಾದ ಸಾತ್ವಿಕ, ತಾತ್ವಿಕ ಸ್ನೇಹಿತರು, ಬಂಧುಗಳು ಈ ದಾರಿಯಲ್ಲಿ ನೆರವಾಗುವುದು ಇದಕ್ಕೆ ಕಾರಣ. ಪ್ರತಿಯೊಬ್ಬರಿಗೂ ಶರೀರ ಶುದ್ಧಿ, ವಿಚಾರ ಶುದ್ಧಿ, ಆತ್ಮಶುದ್ಧಿ ಇರಬೇಕು ಎಂದು ಕೆಎಎಸ್ ಅಧಿಕಾರಿ, ಸಚಿವ ಶರಣಬಸಪ್ಪ ದರ್ಶನಾಪುರ ಅವರ ಆಪ್ತ ಕಾರ್ಯದರ್ಶಿ ಡಾ| ಶ್ರೀಶೈಲ ಬಿದರಕುಂದಿ ಹೇಳಿದರು.
ಇಲ್ಲಿನ ಹುಡ್ಕೋದಲ್ಲಿರುವ ಪಂಜುರ್ಲಿ ಸಭಾಂಗಣದಲ್ಲಿ ಸ್ನೇಹಿತರ ಬಳಗ, ಬಿದರಕುಂದಿ ಪರಿವಾರ ವತಿಯಿಂದ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಬಿದರಕುಂದಿ ಹಾಗೂ ತಮ್ಮ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಗುರು ನಮನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳ ನುಡಿ ತುಂಬುವುದೇ ಖಾಲಿ ಆಗುವುದಕ್ಕೆ, ಏರುವುದೇ ಇಳಿಯುವುದಕ್ಕೆ, ಬಂದಿರುವುದೇ ಹೋಗುವುದಕ್ಕೆ ಎನ್ನುವುದನ್ನು ಸ್ಮರಿಸಿಕೊಂಡ ಅವರು ನಾವು ಸಾಧಿಸಬೇಕು. ಬಡತನ ಸಾಧನೆಗೆ ಅಡ್ಡಿ ಆಗುವುದಿಲ್ಲ. ಆದರೆ ಸಾಧಿಸಲು ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಗುರುಗಳ, ಸ್ನೇಹಿತರ, ಬಂಧುಗಳ ಸಹಕಾರ ಅತ್ಯಗತ್ಯವಾಗಿರುತ್ತದೆ. ವಿದ್ಯೆ ನೀಡಿದ ಗುರುವನ್ನು ಮರೆಯದಿರುವುದು, ಗೌರವಿಸುವುದು ನಮ್ಮ ಸನಾತನ ಪರಂಪರೆಯ ಸಂಸ್ಕೃತಿಯ ವೈಭವ ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಪ್ರೊ| ಬಿ.ಎಂ.ಹಿರೇಮಠ ಅವರು ಮಾತನಾಡಿ, ಬಡತನ ಅದ್ಭುತ ಪಾಠವನ್ನು ಕಲಿಸುತ್ತದೆ. ಸರ್ಕಾರದ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗುರವಿನ ಪಾದ ಮುಟ್ಟಿ ನಮಸ್ಕರಿಸುತ್ತಾರೆ ಎಂದರೆ ಅವರಿಗೆ ಸಂಸ್ಕಾರ ಇದೆ ಅನ್ನೋದು ಸಾಬೀತಾಗುತ್ತದೆ. ಬಡತನದಲ್ಲಿ ಬೆಳೆದವರು ಬಹು ಎತ್ತರಕ್ಕೆ ಹೋಗ್ತಾರೆ ಅನ್ನೋದಕ್ಕೆ ಬಿದರಕುಂದಿ ಪರಿವಾರವೇ ಸಾಕ್ಷಿಯಾಗಿದೆ. ವಿದ್ಯೆ ವಿನಯತೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ಡಾ| ಶ್ರೀಶೈಲ, ಮಲ್ಲಿಕಾರ್ಜುನ ಸಹೋದರರಿಂದ ಕಲಿಯಬೇಕಿದೆ ಎಂದರು.
ಎAಜಿವಿಸಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ| ಎಸ್.ಜಿ.ನಂದಿ ಅವರು ಮಾತನಾಡಿ, ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದೆ. ವಿದ್ಯೆ ನೀಡಿದ ಶಿಕ್ಷಕರು, ಮಾರ್ಗದಶರ್ನ ಮಾಡಿದ ಹಿರಿಯರು, ನೆರವಾದ ಸ್ನೇಹಿತರು ಮುಂತಾದವರನ್ನು ಸನ್ಮಾನಿಸಿ ಗೌರವಿಸುವುದು ಭಾರತೀಯ ಸಂಸ್ಕöÈತಿಗೆ ಉದಾಹರಣೆಯಾಗಿದೆ. ಪರಿಶ್ರಮ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ಯುವಪೀಳಿಗೆಯ ಪ್ರತಿಯೊಬ್ಬರೂ ನಿಂತ ನೀರಾಗದೆ ಹರಿಯುವ ನೀರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂಜಿವಿಸಿ ಕಾಲೇಜಿನ ವಿಶ್ರಾಂತ ಉಪನ್ಯಾಸಕರಾದ ಎ.ಬಿ.ಸುಂಕದ ಅವರು ಮಾತನಾಡಿ, ಜ್ಞಾನಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಮುದ್ದೇಬಿಹಾಳದ ಜನ ಒಳ್ಳೇಯವರು. ಎಂಜಿವಿಸಿ ಕಾಲೇಜು ಸ್ಥಾಪಿಸಿದ ಮಹಾದಾನಿ ಮಾತೋಶ್ರೀ ಗಂಗಮ್ಮನವರು ಎಲ್ಲರನ್ನೂ ಎತ್ತಿ ಹಿಡಿದಿದ್ದಾರೆ. ಶಿಕ್ಷಕರಾದವರು ಕಲಿಸುತ್ತಲೇ ಅನುಭವ ಗಳಿಸುತ್ತಾರೆ. ಇದೊಂದು ಸ್ಮರಣೀಯ ಕಾರ್ಯಕ್ರಮ ಎಂದರು.
ಚಡಚಣದ ಉಪನ್ಯಾಸಕ ಡಾ| ಎಸ್.ಎಸ್.ದೇಸಾಯಿ, ಅರಿಹಂತ ಕಾಲೇಜಿನ ಉಪನ್ಯಾಸಕ ಪ್ರೊ| ರಾಜನಾರಾಯಣ ನಲವಡೆ ಅವರು ಗುರುಗಳ ಮಹತ್ವದ ಕುರಿತು ಮಾತನಾಡಿದರು. ಮಲ್ಲಿಕಾರ್ಜುನ, ಡಾ| ಶ್ರೀಶೈಲ ಅವರ ತಾಯಿ ಅಕ್ಕಮಹಾದೇವಿ ಬಿದರಕುಂದಿ, ನಿವೃತ್ತ ಶಿಕ್ಷಕ ಸಾಹಿತಿ ಎಸ್.ಬಿ.ಕನ್ನೂರ, ಬಸವರಾಜ ಬಿದರಕುಂದಿ, ಗುರುಲಿಂಗ ಜಂಗಮ ವೇದಿಕೆಯಲ್ಲಿದ್ದರು.
ವಿದ್ಯೆ ಕಲಿಸಿದ ಗುರುಗಳು, ಮಾರ್ಗದರ್ಶನ ನೀಡಿದ ಹಿರಿಯರು ಮತ್ತು ನೆರವು ನೀಡಿದ ಸ್ನೇಹಿತರು ಸೇರಿ ೩೫-೪೦ ಜನರನ್ನು ಸನ್ಮಾನಿಸಲಾಯಿತು. ಹಲವರು ಮಲ್ಲಿಕಾರ್ಜುನ, ಡಾ| ಶ್ರೀಶೈಲ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಚAದ್ರಶೇಖರ ಪ್ಯಾಟಿಗೌಡರ ಪ್ರಾರ್ಥಿಸಿದರು. ಖ್ಯಾತ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿ ಪ್ರಶಾಂತ ಮೋಟಗಿ ನಿರೂಪಿಸಿದರು. ಮಲ್ಲಿಕಾರ್ಜುನ ಬಿದರಕುಂದಿ ವಂದಿಸಿದರು.plo

 

विज्ञापन बॉक्स (विज्ञापन देने के लिए संपर्क करें)

ಇದನ್ನೂ ಓದಿ ----

ತಪ್ಪದೇ ಮತ ಚಲಾಯಿಸಿ

क्या आपको लगता है कि बॉलीवुड ड्रग्स केस में और भी कई बड़े सितारों के नाम सामने आएंगे?

View Results

Loading ... Loading ...

आज का राशिफल देखें