ಮುದ್ದೇಬಿಹಾಳ ; ಅಗಸ್ಟ್ 23 ಶನಿವಾರದಂದು ತಾಲೂಕಿನ ಕುಂಚಗನೂರ ಗ್ರಾಮದ ರೈತ ಕಾಶಪ್ಪ ಹಣಮಂತ ಕಂಬಳಿ ಕೃಷ್ಣ ನದಿಯಲ್ಲಿ ಎತ್ತುಗಳ ಮೈತೂಳೆಯಲು ಹೋಗಿ ಮೊಸಳೆ ದಾಳಿಗೆ ಬಲಿಯಾಗಿದ್ದು ಆ ಕುಟುಂಬಕ್ಕೆ ಸರಕಾರದಿಂದ ಸ್ಥಳೀಯ ಜನ ಪ್ರತಿನಿಧಿಗಳು 20 ಲಕ್ಷ ರೂ ಪರಿಹಾರ ಒದಗಿಸಿಕೂಡಬೇಕೆಂದು ಜೆಡಿಎಸ್ ಪಕ್ಷದ ಹಾಗೂ ರೈತ ಸಂಘದ ಮುಖಂಡ ಬಿ.ಬಿ ಪಾಟೀಲ್ ಮುರಾಳ ಒತ್ತಾಯಿಸಿದರು ಮಂಗಳವಾರ ರೈತ ಹಾಗೂ ಜೆಡಿಎಸ್ ಪಕ್ಷದ ಮುಖಂಡರೂಂದಿಗೆ ಮೊಸಳೆ ದಾಳಿಗೆ ಬಲಿಯಾದ ರೈತ ಕಾಶಪ್ಪ ಕಂಬಳಿ ಸ್ವಗ್ರಾಮ ಕುಂಚಗನೂರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 5 ಸಾವಿರ ರೂ ನೆರವು ನೀಡಿ ಮಾಧ್ಯಮಗಳ ಜೋತೆ ಮಾತನಾಡಿದರು ಮೃತ ಕಾಶಪ್ಪನವರಿಗೆ ನಾಲ್ಕು ಚಿಕ್ಕ ಮಕ್ಕಳಿದ್ದು ಆ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರಕಾರವಹಿಸಿಕೂಳ್ಳಬೇಕು ಆ ಬಡ ಕುಟುಂಬಕ್ಕೆ ನೆರವಾಗಬೇಕೆಂದರು
ಕರ್ನಾಟಕ ರಾಜ್ಯ ಹಸಿರು ಸೇನೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಜಿಲ್ಲಾ ಪ್ರಕಾ ಗುರುಸಂಗಪ್ಪಗೌಡ ಹಂಡರಗಲ್ ಮಾತನಾಡಿ ಕುಂಚಗನೂರು ಸೇರಿದಂತೆ ನದಿತೀರದ ಗ್ರಾಮಗಳಲ್ಲಿ ತಡೆಗೂಡೆ ನಿರ್ಮಾಣ ಮಾಡಬೇಕು ಎಚ್ಚರಿಕೆ ನಾಮಫಲಕ ಹಾಕಬೇಕು, ಕೃಷ್ಣ ನದಿ ಪ್ರವಾಹಕ್ಕೆ ಬಲಿಯಾಗಲಿರುವ ಕುಂಚಗನೂರು ಕಮ್ಮಲದಿನ್ನಿ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮಕೈಗೂಳ್ಳಬೇಕು ನದಿಯಲ್ಲಿ ಮೊಸಳೆಗಳು ಇರುವುದರಿಂದ ಎರಡು ದಿನಕ್ಕೂಮ್ಮೆ ನೀರ ಬಿಡಬೇಕು ಬಟ್ಟೆ ಒಗೆಯಲು ಪಂಚಾಯತಿಯಿಂದ ದೋಬಿ ಘಾಟ್ ಜಾನುವಾರುಗಳಿಗೆ ನೀರು ಕುಡಿಯಲು ಮೈ ತೊಳೆಯಲು ವ್ಯವಸ್ಥೆ ಕಲ್ಪಿಸಬೇಕು ಮೊಸಳೆ ದಾಳಿಗೆ ಬಲಿಯಾದ ಕಾಶಪ್ಪ ಕಂಬಳಿ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಒದಗಿಸುವ ಕಾರ್ಯ ಶಾಸಕರು ಮಾಡಬೇಕೆಂದರು
ಈ ವೇಳೆ ಮುಖಂಡುಗಳಾದ ಮಲ್ಲನಗೌಡ ಬಿರಾದಾರ , ಮಲ್ಲು ಬಿಸಲದಿನ್ನಿ, ಧರೆಯಪ್ಪ ಬಿಸಲದಿನ್ನಿ, ಎಸ್ ಬಿ ಸಾತಿಹಾಳ, ಶಿವು ವಣಕ್ಯಾಳ ಸೇರಿದಂತೆ ಕುಂಚಗನೂರು ಗ್ರಾಮದ ಹಿರಿಯರು ಇದ್ದರು
ಪ್ರವಾಹ ಪೀಡಿತ ಗ್ರಾಮಗಳಾದ ಕುಂಚಗನೂರು, ಕಮ್ಮಲದಿನ್ನಿ ಗಂಗೂರು ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಕೃಷ್ಣ ನದಿ ನೀರು ಬಿಟ್ಟಾಗಲೆಲ್ಲಾ ಗ್ರಾಮದೂಳಗೆ ಮೊಸಳೆ ಸೇರಿದಂತೆ ಹಾವು ವಿಷಜಂತುಗಳು ಬರುತ್ತವೆ ಶಾಂತಪ್ಪ ಕಂಬಳಿ ಬಲಿಯಾದಂತೆ ಇನ್ನೆಷ್ಟು ಅಮಾಯಕ ಜನರ ಪ್ರಾಣ ಬಲಿಯಾಗಬೇಕು? ಕೃಷ್ಣಜಲ ನಿಗಮದ ಅಧಿಕಾರಿಗಳು ಜಿಪಂ ತಾಪಂ ತಾಲೂಜ ಆಡಳಿತ ಅಧಿಕಾರಿಗಳು ಈ ಗ್ರಾಮಗಳಿಗೆ ಭೇಟಿ ವಾಸ್ತವ ಸಮಸ್ಯೆ ಅರಿತು ಗ್ರಾಮ ಸ್ಥಳಾಂತರಕ್ಕೆ ಕ್ರಮಕೈಗೂಳ್ಳಬೇಕು ಈ ಗ್ರಾಮಗಳಲ್ಲಿ ಪಕ್ಕದಲ್ಲಿ ನದಿ ಇದ್ದರು ಸರಿಯಾಗಿ ನೀರು ಬಿಡುವುದಿಲ್ಲ, ನದಿ ತೀರದಲ್ಲಿ ಮೊಸಳೆಗಳಿವೆ ಎಂಬ ನಾಮಫಲಕ ಹಾಕಿಲ್ಲ ; ಬಿ.ಬಿ ಪಾಟೀಲ್ ಜೆಡಿಎಸ್ ಹಾಗೂ ರೈತ ಮುಖಂಡರು






